Saturday, December 12, 2009

ಕಾಗೆ ಒಂದುಗುಳ ಕಂಡಡೆ ಕರೆಯದೆ ತನ್ನ ಬಳಗವನು?

ಕಾಗೆ ಒಂದುಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೊಳಿಒಂದು ಕುಟುಕ ಕಂಡಡೆ
ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ
ಕಾಗೆ ಕೋಳಿಯಿಂದ ಕರಕಷ್ಠ
ಕುಸಂಗಮದೆವಾ.  

ಕರಿಯಂಜೂದು ಅಂಕುಶಕ್ಕಯ್ಯ

ಕರಿಯಂಜೂದು ಅಂಕುಶಕ್ಕಯ್ಯಾ,
ಗಿರಿಯಂಜೂರು ಕುಲಿಶಕ್ಕಯ್ಯಾ,
ತಮಂಧವಂಜೂದು ಜ್ಯೋತಿಗೆಯ್ಯಾ,
ಕನನವಂಜೂದು ಬೆಗೆಗಯ್ಯಾ,
ಪಂಚಮಹಾಪಾತಕವಂಜೂದು
ಕೂಡಲಸಂಗನ ನಾಮಕ್ಕಯ್ಯಾ.

Friday, December 11, 2009

ಕೆಡೆ ನಡೆಯದೆ, ಕೆಡೆ ನುಡಿಯದೆ,

ಕೆಡೆ ನಡೆಯದೆ, ಕೆಡೆ ನುಡಿಯದೆ,
ಅನ್ಯರ ಪ್ರತಿಪದಿಸದಿದ್ದಡೆ,
ಏನ ಮಾಡನಯ್ಯಾ ಲಿಂಗವು?
ಏನ ಕೊಡನಯ್ಯ?
ತಾನು ಏನ ಬೇಡಿದುದನೀವನಾಗಿ,
ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ,
ಕುದಳಸಂಗಮದೆವಾ.

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಹ,
ಕೂಡಲಸಂಗಮದೇವ.

ದೇವಲೋಕ ಮರ್ತ್ಯಲೋಕವೆಂಬುದುಬೇರಿಲ್ಲ ಕಾಣಿರೋ

ದೇವಲೋಕ ಮರ್ತ್ಯಲೋಕವೆಂಬುದುಬೇರಿಲ್ಲ ಕಾಣಿರೋ!
ಸತ್ಯವನು ನುಡಿವುದೇ ದೇವಲೋಕ
ಮಿಥ್ಯುವನು ನುಡಿವುದೇ  ಮರ್ತ್ಯಲೋಕ,
ಆಚಾರವೇ ಸ್ವರ್ಗ, ಅನಾಚಾರವೇ ನರಕ,
ಕುಡಲಸಂಗಮದೇವ ನೀವೆ ಪ್ರಮಾಣು.

ಎತ್ತೆತ್ತನೋಡಿದಡತ್ತತ್ತ ನೀನೇ ದೇವ

ಎತ್ತೆತ್ತನೋಡಿದಡತ್ತತ್ತ ನೀನೇ ದೇವ,
ಸಕಲ ವಿಸ್ತಾರದ ರೂಹು ನೀನೆ ದೇವ,
"ವಿಶ್ವಶತ್ಚ್ಹಕ್ಷು" ನೀನೆ ದೇವ,
"ವಿಶ್ವತೊಮುಖ" ನೀನೆ ದೇವ,
"ವಿಶ್ವತೋಬಹು" ನೀನೆ ದೇವ,
"ವಿಶ್ವತಃಪಾದ" ನೀನೆ ದೇವ,
ಕೂಡಲ ಸಂಗಮದೇವ

Wednesday, July 22, 2009

ದಯವಿಲ್ಲದ ಧರ್ಮವದೆವುದಯ್ಯಾ

ದಯವಿಲ್ಲದ ಧರ್ಮವದೆವುದಯ್ಯಾ
ದಯವೇ ಬೇಕು ಸರ್ವ ಪ್ರಣಿಗಲೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ


In English,...

Dayavillada Dharmadyavudayya
Dayave beku sarva pranigalelleralli
Dayave dharmada moolavayya
Kudala Sangayyananthalladollanayya

There is no religion which doesn't teach compassion. Love, tolerance and affection is preached by all religions. Compassion is the root of all reliogions.

ಜಗದಗಲ ಮುಗಿಲಗಲ

ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ
ಪತಾಳದಿಂದವೇ ಅತ್ತತ್ತ ನಿಮ್ಮ ಶ್ರೀಚರಣ
ಬ್ರಮ್ಹಾನ್ದಿಂದವೇ ಅತ್ತತ್ತ ನಿಮ್ಮ ಶ್ರೀಮುಕುಟ
ಅಗಮ್ಯ ಎಗೋಚರ ಅಪ್ರತಿಮ ಲಿಂಗವೆ ಕುದಳಸಂಗಮದೆವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ

ದೇವನೊಬ್ಬ ನಾಮ ಹಲವು

ದೇವನೊಬ್ಬ ನಾಮ ಹಲವು,
ಪರಮಪತಿವ್ರತೆಗೆ ಗಂಡನೊಬ್ಬ,
ಮತ್ತೋದಕ್ಕೆರಗಿದಡೆ ಕಿವಿ-ಮುಗ ಕೊಯವ್ನು
ಹಲವು ದೈವದ ಎಂಜಲ ತಿಂಬವರನೆನೆಂಬೇ !
ಕುಡಲಸಂಗಮದೇವ !

ಕಳಬೇಡ, ಕೊಲಬೇಡ,

ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ,
ಇದೇ ಬಹಿರಂಗ ಶುದ್ದಿ,
ಇದೇ ನಮ್ಮ ಕೂಡಲಸಂಗಮ
ದೇವರ ನೊಲೆಸುವ ಪರಿ.

Thursday, May 7, 2009

Ullavaru Shivalaya - Raag Madhuvanti

One of the most popular Basavanna Vachana - has lot of depth and meaning. I have reproduced the same in English for the benefit of those who cannot read Kannada script here below and then also put the same in Kannada.


ullavaru shivalaya maaduvaru naanena maadali badavanayya,
enna kaale kamba dehave degula shirave honna kalashavayya
Koodala Sangama Deva kelayya sthavarakkalivuntu jangamakalivilla


ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ,
ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು ಜನ್ಗಮಕಲಿವಿಲ್ಲ




It talks about greatness of a true believer in God. It says "People who are rich, have the ability to built temples or places of worship. I am a poor man, what can I do? My legs are the pillars, my body is the temple and my head the wonderful dome. O lord! things standing will fall some day, those moving will never!!"


This vachana has been beautifully sung by Nachiketa Sharma, in a melodious raag, in this YouTube video clip.