Saturday, December 12, 2009

ಕಾಗೆ ಒಂದುಗುಳ ಕಂಡಡೆ ಕರೆಯದೆ ತನ್ನ ಬಳಗವನು?

ಕಾಗೆ ಒಂದುಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೊಳಿಒಂದು ಕುಟುಕ ಕಂಡಡೆ
ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ
ಕಾಗೆ ಕೋಳಿಯಿಂದ ಕರಕಷ್ಠ
ಕುಸಂಗಮದೆವಾ.  

ಕರಿಯಂಜೂದು ಅಂಕುಶಕ್ಕಯ್ಯ

ಕರಿಯಂಜೂದು ಅಂಕುಶಕ್ಕಯ್ಯಾ,
ಗಿರಿಯಂಜೂರು ಕುಲಿಶಕ್ಕಯ್ಯಾ,
ತಮಂಧವಂಜೂದು ಜ್ಯೋತಿಗೆಯ್ಯಾ,
ಕನನವಂಜೂದು ಬೆಗೆಗಯ್ಯಾ,
ಪಂಚಮಹಾಪಾತಕವಂಜೂದು
ಕೂಡಲಸಂಗನ ನಾಮಕ್ಕಯ್ಯಾ.

Friday, December 11, 2009

ಕೆಡೆ ನಡೆಯದೆ, ಕೆಡೆ ನುಡಿಯದೆ,

ಕೆಡೆ ನಡೆಯದೆ, ಕೆಡೆ ನುಡಿಯದೆ,
ಅನ್ಯರ ಪ್ರತಿಪದಿಸದಿದ್ದಡೆ,
ಏನ ಮಾಡನಯ್ಯಾ ಲಿಂಗವು?
ಏನ ಕೊಡನಯ್ಯ?
ತಾನು ಏನ ಬೇಡಿದುದನೀವನಾಗಿ,
ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ,
ಕುದಳಸಂಗಮದೆವಾ.

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಹ,
ಕೂಡಲಸಂಗಮದೇವ.

ದೇವಲೋಕ ಮರ್ತ್ಯಲೋಕವೆಂಬುದುಬೇರಿಲ್ಲ ಕಾಣಿರೋ

ದೇವಲೋಕ ಮರ್ತ್ಯಲೋಕವೆಂಬುದುಬೇರಿಲ್ಲ ಕಾಣಿರೋ!
ಸತ್ಯವನು ನುಡಿವುದೇ ದೇವಲೋಕ
ಮಿಥ್ಯುವನು ನುಡಿವುದೇ  ಮರ್ತ್ಯಲೋಕ,
ಆಚಾರವೇ ಸ್ವರ್ಗ, ಅನಾಚಾರವೇ ನರಕ,
ಕುಡಲಸಂಗಮದೇವ ನೀವೆ ಪ್ರಮಾಣು.

ಎತ್ತೆತ್ತನೋಡಿದಡತ್ತತ್ತ ನೀನೇ ದೇವ

ಎತ್ತೆತ್ತನೋಡಿದಡತ್ತತ್ತ ನೀನೇ ದೇವ,
ಸಕಲ ವಿಸ್ತಾರದ ರೂಹು ನೀನೆ ದೇವ,
"ವಿಶ್ವಶತ್ಚ್ಹಕ್ಷು" ನೀನೆ ದೇವ,
"ವಿಶ್ವತೊಮುಖ" ನೀನೆ ದೇವ,
"ವಿಶ್ವತೋಬಹು" ನೀನೆ ದೇವ,
"ವಿಶ್ವತಃಪಾದ" ನೀನೆ ದೇವ,
ಕೂಡಲ ಸಂಗಮದೇವ